- ಸ್ವಭಾವತಃ ಮೂರ್ಖನಾದರೂ ಸ್ಥಿತಪ್ರಙ್ಞನಂತೆ ಮುಖವಾಡಹಾಕಿ ನನ್ನದಲ್ಲದ ಬಾಳನ್ನು ತೋರಿಕೆಗಾಗಿ ಬಾಳಲೆತ್ನಿಸುತ್ತಿರುವ ಮತಿಗೇಡಿ ನಾನಲ್ಲ.
- ಜೀವನದ ಹಾದಿಯ ಪ್ರತಿಯೊಂದು ಮಜಲಿನಲ್ಲೂ ಸ್ವಾರ್ಥದ ಸೋಗನ್ನು ಬಿಡಿಸಲಾರದಂತೆ ವ್ಯಕ್ತಿತ್ವಕ್ಕೆ ಅಂಟಿಸಿಕೊಂಡು ಕೊಂಡೊಯ್ಯುತ್ತಿರುವವ ನಾನಲ್ಲ.
- ಜೀವನದ ತಲೆ-ಬುಡಗಳ ಪರಿವೆಯಿಲ್ಲವಾದರೂ, ಪ್ರತಿಯೊಂದನ್ನೂ ಅಧ್ಯಾತ್ಮದ, ತತ್ವಙ್ಞಾನದ ಗುಂಗಿನಲ್ಲಿ ಮಾತನಾಡುವವ ನಾನಲ್ಲ.
- ಮೂರ್ಖತನದ ಪರಮಾವಧಿಯಲ್ಲಿ ಇರುವೆನೆಂದು ತಿಳಿದ ಮೇಲೂ, ಸ್ವಾನ್ವೇಷಣೆಯ ವಿಫಲ ಪ್ರಯತ್ನದಲ್ಲಿ ತೊಡಗಿರುವವ ನಾನಲ್ಲ.