ಹಳೇ favourite.

ಹುಣ್ಣಿಮೆ ರಾತ್ರಿ - ಕುವೆಂಪು.

ಒ ನೋಡದೋ ರಂಜಿಸಿತಿದೆ ರಜನಿಯ ಕೈದೀಪ
ನೀಲಧಿಯಲಿ ತೇಲುತ್ತಿಹ ಜ್ಯೋತಿಯ ಸ್ವರ್ದ್ವೀಪ

ತೆಳುತೆಳ್ಳನೆ ಬೆಳು ಬೆಳ್ಳನೆ ಮುಗಿಲುಣ್ಣೆಯ ರಾಶಿ
ಹೊಂಜನ್ನದಿ ಮಿಂದಂತಿದೆ ಜೇನ್ಮಳೆಯನಿ ಸೂಸಿ

ಸಹ್ಯಾದ್ರಿಯ ಗಿರಿವರ್ಣದ ಕೊನೆಗಾಣದ ಲೀಲೆ
ಬಹುಯೋಜನ ವಿಸ್ತೀರ್ಣದ ವನರಾಜಿಯ ಮಾಲೆ

ಬಾಂದಳದಿಂದಿಳಿಯುತ್ತಿರೆ ಬೆಳ್ದಿಂಗಳ ಗಂಗೆ
ಹೊಳೆಯುತ್ತಿದೆ ಬರೆದಂದದಿ ದೂರದಿ ನದಿ ತುಂಗೆ

ಆಹ್! ಆಲಿಸು ಆಕಾಶದಿ ತೇನೆಯ ಸುರವಾಣಿ
ಜುಮ್ಮೆಂದಿದೆ ಅದನಾಲಿಸಿ ಸಹ್ಯಾದ್ರಿಯ ಶ್ರೇಣಿ

ಸೊಂದರ್ಯದ ಮಧುಪಾನದಿ ವಿಶ್ವವೇ ಉನ್ಮತ್ತ
ಧ್ಯಾನದ ರಸದಾನಂದದಿ ಸೃಷ್ಟಿ ಸಮಾಧಿಸ್ಥ

ಏಂ ನೀರವಮೇಂ ನಿಶ್ಚಲಮೀ ಹಿಣ್ಣಿಮೆಯಿರುಳು
ತಿಂಗಳ ಬೆಳಕಿಂಗಡಲಲಿ ತೇಲಿದೆ ತಿರಿಯರಳು

ಸುಧೆ ತುಂಬಿದ ಮಿದುಬಿಂಬದ ಮಧುಚಂದ್ರಿಕೆ ಮಾಯೆ
ನೆಲಬಾನ್ಗಳನೊಲಿದೊಪ್ಪಿರೆ ದ್ವೈತವು ಬರಿ ಛಾಯೆ

ಓ ರಾತ್ರಿಯೆ ಸಹ್ಯಾದ್ರಿಯೆ ಹುಣ್ಣಿಮೆ ಶಶಿಕಾಂತಿ
ನಿಮ್ಮೆಲ್ಲರ ಸಾನ್ನಿಧ್ಯವೆ ಪರಮಾತ್ಮನ ಶಾಂತಿ

Leave a Reply